ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಬುದ್ಧನಜೆಡ್ಡಿನಲ್ಲಿ ಕಿ.ಪೂ.18,000 ವರ್ಷಕ್ಕಿಂತ ಹಿಂದಿನ ಸೂಕ್ಷ್ಮಶಿಲಾಯುಗ ಕಾಲದ ಬಂಡೆಕಲ್ಲಿನ ಚಿತ್ರಗಳು ಪತ್ತೆ

ಉಡುಪಿ: ಬುದ್ಧನಜೆಡ್ಡಿನಲ್ಲಿ ಕಿ.ಪೂ.18,000 ವರ್ಷಕ್ಕಿಂತ ಹಿಂದಿನ ಸೂಕ್ಷ್ಮಶಿಲಾಯುಗ ಕಾಲದ ಬಂಡೆಕಲ್ಲಿನ ಚಿತ್ರಗಳು ಪತ್ತೆ

Sat, 05 Dec 2009 03:08:00  Office Staff   S.O. News Service
ಉಡುಪಿ, ಡಿ.೩: ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ಬುದ್ಧನಜೆಡ್ಡಿನ ಭೀಮನ ಪಾರೆಯಲ್ಲಿ (ಬಂಡೆಕಲ್ಲು) ಸೂಕ್ಷ್ಮ ಶಿಲಾಯುಗ ಕಾಲದ ವಿವಿಧ ಬಂಡೆಕಲ್ಲಿನ ಚಿತ್ರಗಳು ಪತ್ತೆಯಾಗಿವೆ.

ನೇರಳಕಟ್ಟೆಯಿಂದ ಸುಮಾರು 3 ಕಿ.ಮೀ.ದೂರದಲ್ಲಿರುವ ಭೀಮನಪಾರೆಯಲ್ಲಿ ಮೂರು ಹೋರಿಯ ಚಿತ್ರಗಳು, ಮೂರು ಮಾನವನ ಚಿತ್ರ, ಒಂದು ಬ್ರೂಣ, ಚೌಕಾಕಾರದ (ಮನೆ) ಚಿತ್ರ, ಎರಡು ಗೂಳಿಯ ಚಿತ್ರ, ಪಾದಗಳ ಚಿತ್ರ, ವೃತ್ತಾಕಾರದ ರಚನೆ, ಟಿ ಆಕಾರದ ರಚನೆಗಳು ದೊರೆತಿದ್ದು,

ಇವುಗಳನ್ನು ಕಿ.ಪೂ.18,000 ವರ್ಷಕ್ಕಿಂತ ಹಿಂದಿನವುಗಳು ಎಂದು ಅಂದಾಜಿಸಲಾಗಿದೆ.

ಈಗಾಗಲೇ ಉಡುಪಿ ಜಿಲ್ಲೆಯ ಗಾವಳಿ, ಗೋವಾ, ಮಹಾರಾಷ್ಟ್ರ ಹಾಗೂ ಕೇರಳದ ಎತ್ತರ ಬಂಡೆಗಳ ಮೇಲೆ ಇಂತಹ ಶಿಲಾಯುಗ ಕಾಲದ ಚಿತ್ರಗಳು ಲಭಿಸಿವೆ. ಆದರೆ ಬುದ್ಧನ ಜೆಡ್ಡಿನ ನೆಲಮಟ್ಟದಲ್ಲಿರುವ ಬಂಡೆಯ ಮೇಲೆ ಲಭಿಸಿರುವ ಚಿತ್ರಗಳು ರಾಜ್ಯದಲ್ಲಿ ಪ್ರಥಮವಾಗಿದ್ದು, ‘ಟಿ’ಆಕಾರದ ರಚನೆಯು ದೊರೆತಿರುವುದು ವಿಶ್ವದಲ್ಲಿಯೇ ಪ್ರಥಮ ಎನ್ನುತ್ತಾರೆ ಸಂಶೋಧಕ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕ ಟಿ.ಮುರುಗೇಶಿ.

ಬುದ್ಧಜೆಡ್ಡಿನಲ್ಲಿ ಬುದ್ಧನ ಅವಶೇಷಗಳು ಲಭಿಸುತ್ತದೆಂಬ ನಂಬಿಕೆಯ ಮೇರೆಗೆ ಸುಮಾರು ಮೂರು ತಿಂಗಳಿನ ಹಿಂದೆ ಟಿ.ಮುರುಗೇಶಿ ಅವರ ನೇತೃತ್ವದಲ್ಲಿ ಇತಿಹಾಸಕಾರರಾದ ಶ್ರೀಧರ ಭಟ್, ಪ್ರಶಾಂತ್ ಶೆಟ್ಟಿ, ಜಯರಾಮ ಶೆಟ್ಟಿಗಾರ್ ಹಾಗೂ ಕಲಾವಿದರಾದ ರಾಘವೇಂದ್ರ ಅಮೀನ್ ಮತ್ತು ನವೀನ್ ಅವರನ್ನೊಳಗೊಂಡ ತಂಡವು ಭೀಮನ ಪಾರೆಯಲ್ಲಿ ಅನ್ವೇಷಣೆಗೆ ಮುಂದಾಗಿದ್ದು, ಈಗಾಗಲೇ ಮೂರುಬಾರಿ ಅನ್ವೇಷಣೆ ನಡೆಸಿದೆ. ಮೊದಲ ಬಾರಿ ನಡೆಸಿದ ಅನ್ವೇಷಣೆಯಲ್ಲಿ ಮನುಷ್ಯನ ಚಿತ್ರ, ಎರಡನೇ ಬಾರಿಗೆ ಹೋರಿಯ ಚಿತ್ರಗಳು ಲಭಿಸಿವೆ. ಮನುಷ್ಯನ ಚಿತ್ರವನ್ನು ಗಮನಿಸಿದ ಇತಿಹಾಸಕಾರರಾದ ಡಾ|ಎ.ಸುಂದರ, ಡಾ|ರಾಜನ್ ಅವರು ಇದನ್ನು ಶಿಲಾಯುಗ ಕಾಲದ್ದು ಎಂದು ಅಂದಾಜಿಸಿದ್ದಾರೆ.

ಒಂದು ವರ್ಷಗಳ ಕಾಲ ನಡೆಯಲಿರುವ ಈ ಸಂಶೋಧನೆಯು ನಾಲ್ಕನೇ ಬಾರಿಗೆ ಡಿ.೪ರಿಂದ ೬ರ ವರೆಗೆ ನಡೆಯಲಿದೆ. ಈಗಾಗಲೇ ಸುಮಾರು ಐದು ಸೆಂಟ್ಸ್ ಜಾಗದಲ್ಲಿ ೧೦ಕ್ಕೂ ಅಧಿಕ ಚಿತ್ರಗಳು ಲಭಿಸಿದ್ದು, ಒಂದು ಎಕರೆ ಜಾಗದಲ್ಲಿ ಇನ್ನಷ್ಟು ಚಿತ್ರಗಳು ಲಭಿಸಲಿವೆ ಎನ್ನುತ್ತಾರೆ ಸಂಶೋಧಕರು.

Share: